Chapter 1
"ಡೆನೆವಲಾ ಜಾಬ್ ಭೀ ದೇತಾ, ದೇತಾ ಚಪ್ಪರ್ ಫಾಡ್ ಕೆ" ಅನ್ನೋ ಹಿಂಡಿ ನುಡಿಗಟ್ಟಿನ ಸಾರಾ ನನಗೆ ಪೂರ್ತಿಯಾಗಿ ತಿಳಿದದ್ದು ಅದು ನನ್ನ ಜೀವನದಲ್ಲಿ ಅದಾಗಲೇ.
ಆ ಕರಾಳ ದಿನ ನನಗೆ exam ಇರದಿದ್ದರೆ ಹೀಗೆ ನಾನು ಇದನ್ನು ಬರೆಯುತ್ತಲೇ ಇರಲಿಲ್ಲ. ಏಕೆಂದರೆ ನನ್ನ ಸಕುಟುಂಬ ಸಮೇತ ನಾನು ವೈಕುಂಠ ಸೇರಿಕೊಳ್ಳುತ್ತಿದೆ.
ಯಾರೋ ಸಂಬಂಧಿಕರ ಮದುವೆಗೆಂದು ನನ್ ಅಮ್ಮ, ಅಪ್ಪ car ನಲ್ಲಿ ಬಾಗಲಕೋಟೆಗೆ ಹೋಗಿದ್ದರು. ಮದುವೆ ಮುಗಿಸಿ, ಮೂರು ದಿನ ಅಲ್ಲೇ ಸುತ್ತಾಡಿ, ಬರುವಾಗ ನನ್ನ ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಅವರ ಮಗ ಮೂವರನ್ನು ಜೊತೆಗೆ ಕರೆದುಕೊಂಡು ಬರುತ್ತಿದ್ದರು.
ರಾತ್ರಿ ಸುಮಾರು 11 ಗಂಟೆಯ ಆಸುಪಾಸು. ಎಣ್ಣೆಯ ಮತ್ತಿನಲ್ಲಿ ತೇಲುತ್ತಾ, truck ಅನ್ನು aeroplane ನಂತೆ ಓಡಿಸುತ್ತಾ ಬಂದ ಜವರಾಯ ಒಮ್ಮೆಲೇ ನಮ್ಮ ಕಾರು ಅನ್ನು ಅಪ್ಪಳಿಸಿದ. ಆ ಪುಟ್ಟ ಕಾರು ಮೂರು ಬಾರಿ ಪಲ್ಟಿ ಹೊಡೆದು ಒಂದು ದೈತ್ಯ ಬಂಡೆಗೆ ಅಪ್ಪಳಿಸಿ ಅದರ ಆಕಾರ ಬದಲಿಸಿ ಜಖಂ ಗೊಂಡಿತು. ಆ ದೈತ್ಯ ಟ್ರಕ್ಕಿನ ದಿಕ್ಕಿಗೆ ನುಜ್ಜಾಗಿ ರಸ್ತೆಯ ಮಧ್ಯದಲ್ಲೆಲ್ಲ ರಕ್ತ, ಪೆಟ್ರೋಲ್, engine oil ಎಲ್ಲಾ ಸೋರಿ ಆ ಕಾರು ನಿಜವಾಗಿಯೂ ಜೀವ ಕಳೆದುಕೊಂಡಂತಿತ್ತು.
ಆ ಕಾರಿನ ಆಯಸ್ಸೆ ಮುಗಿದ ಮೇಲೆ ಇನ್ನೂ ಅದರೊಳಗಿದ್ದವರ ಪಾಡು ಕೇಳಬೇಕೇ? ಎಲ್ಲರ ಪ್ರಾಣ ಒಮ್ಮೆಲೇ ಹೀರೋ ಹೋಗಿತ್ತು.
ನನ್ನ ಚಿಕ್ಕಮ್ಮ ಹೊರತು ಪಡಿಸಿ.
ಕೈಗೆ ಒಂದು ಸಣ್ಣ ಫ್ರಾಕ್ಚರ್ ಹಾಗೂ ಮೈ ಎಲ್ಲ ತರಚಿದ್ದು ಬಿಟ್ಟರೆ ಅವಳಿಗೆ ಏನು ಆಗಿರಲಿಲ್ಲ.
ಅಲ್ಲೇ ಹೋಗುತ್ತಿದ್ದವರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದರು.
ನನಗೆ ಇದೆಲ್ಲ ತಿಳಿಯುವಷ್ಟರಲ್ಲಿ ಮರು ದಿನ ಮಾಧ್ಯಮವೇ ಆಗಿತ್ತು. ನಾನು ಓಡೋಡಿ ಹೋದೆ, ಆಸ್ಪತ್ರೆಗೆ ನೋಡಲು. ಅದಾದ ಮೇಲೆ ಇನ್ನೂ ಒಂದು ತಿಂಗಳು ಆಗಿದ್ದೆಲ್ಲ ಒಂದು ಭ್ರಮ್ಮೆಯಂತೆ ಇತ್ತು.
ಇತ್ತ ನನ್ನ ಮನೆಯವರ ಕಾರ್ಯಗಳು, ಚಿಕ್ಕಮ್ಮನ ಆರೈಕೆ, ನನ್ನ ಕೊನೆಯ semester ಓದು... ಅಬ್ಬಬ್ಬ!