Continue......
ನಿಧಿ—ನಿಕಿತಾ ತಮ್ಮ ರೂಮಿನಿಂದ ತುಂಬ ಅವಶ್ಯಕವಿರುವುದನ್ನು ಮಾತ್ರ ಹೊಸ ಮನೆಯ ರೂಮಿಗೆ ಶಿಫ್ಟ್ ಮಾಡಿದ್ದು ಉಳಿದದ್ದನ್ನು ಪ್ಯಾಕ್ ಮಾಡಿ ಏದುರಿನ ಖಾಲಿ ರೂಮಿನಲ್ಲಿಟ್ಟರು. ಅಕ್ಕಂದಿರ ಜೊತೆ ನಿಶಾ—ಪೂನಂ—ಸ್ವಾತಿ ಕೂಡ ತಮ್ಮ ಕೈಲಾದದನ್ನು ಹೊತ್ತುಕೊಂಡು ಹೊಸ ರೂಮಿನಲ್ಲಿಡುತ್ತಿದ್ದರು.
ನಿಶಾ.....ಅಕ್ಕ ಇದಿ ರೂಂ ಬೇಡ ಆಕೆ ?
ನಿಕಿತಾ.......ಚಿನ್ನಿ ಈ ರೂಂ ರಿಪೇರಿ ಆಗುತ್ತೆ ಕಂದ ಅಲ್ಲಿವರೆಗೂ ನಾನು ನಿಧಿ ಅಕ್ಕ ಹೊಸ ರೂಮಲ್ಲಿರ್ತೀವಿ.
ಏನೊಂದೂ ಅರ್ಥವಾಗದಿದ್ದರೂ ಮೂವರೂ ತಲೆ ಅಳ್ಳಾಡಿಸಿ ಕೆಳಗೋಡಿದರೆ....
ಪಾವನ......ನಿಧಿ ಈ ವಾರ್ಡ್ ರೋಬಿಗೆ ಬೀಗ ಹಾಕು ಇನ್ನುಳಿದ ಎರಡು ಕಡೆಗೂ ಹೊಸ ವಿನ್ಯಾಸದ ವಾರ್ಡ್ ರೋಬ್ ಮಾಡಲು ಹೇಳಿದ್ದೀನಿ ಬಾತ್ರೂಂ ಕಡೆಗೇನೂ ಇರಲ್ಲ.
ನಿಧಿ......ಅತ್ತಿಗೆ ಈಗಿರೋ ವಾರ್ಡ್ ರೊಬೇ ತುಂಬ ದೊಡ್ಡದಿದ್ಯಲ್ಲ ಇನ್ನೂ ಎರಡು ಕಡೆ ಮಾಡಿಸಿದ್ರೆ ಅದರಲ್ಲೇನು ತುಂಬಿಡೋದು.
ಪಾವನ.......ಏನೇ ನಿಧಿ ಹುಡುಗಿಯಾಗಿ ಏನು ತುಂಬಿಸೋದಂತ ಕೇಳ್ತೀಯಲ್ಲ ದೆಹಲಿ ಕಡೆ ಹೋದಾಗ ಪರ್ಚೇಸ್ ಮಾಡಿ ತಂದು ತುಂಬಿಸು ಜೊತೆಗೆ ನಿಮ್ಮಿಬ್ಬರ ಬುಕ್ಸ್ ಕೂಡ ಇಟ್ಕೊಬಹುದು. ಮಂಚದ ಜೊತೆ ಹಾಸಿಗೆ ಕೂಡ ಚೇಂಜಾಗುತ್ತೆ.
ನಿಕಿತಾ......ಈಗಿರೋದು ವೇಸ್ಟಾಗುತ್ತಲ್ಲ ಅತ್ತಿಗೆ ?
ಪಾವನ.....ಇದನ್ನ ಏದುರು ಮನೆ ಮಹಡಿಯಲ್ಲಿ ಅರಮನೆಯ ಅಡುಗೆಯವರಿಗೆ ಹಾಕಿಸ್ತೀನಿ ಅವರೆಲ್ಲ ಪಾಪ ನೆಲದಲ್ಲೇ ಹಾಸಿಗೆ ಹಾಸಿಕೊಂಡು ಮಲಗ್ತಿದ್ದಾರೆ.
ನಿಧಿ......ಏನಾದ್ರೂ ಮಾಡಿ ಅತ್ತಿಗೆ ನಿಮಗೆ ಬಿಟ್ಟಿದ್ದು ನಮ್ಮಿಬ್ಬರಿಗೆ ಓದಿಕೊಳ್ಳೋದಕ್ಕೆ ಎರಡು ಟೇಬಲ್ ವಿತ್ ಡ್ರಾಯರ್ ಮಾಡಿಸಿ ಇದೊಂದೇ ನನ್ನ ಕೋರಿಕೆ.
ಪಾವನ.......ಸ್ಟಡಿ ಟೇಬಲ್ಲುಗಳಿಗೆ ನಿಮ್ಮಣ್ಣ ಆಗಲೇ ಆರ್ಡರ್ ಮಾಡಿಯಾಗಿದೆ ನನಗಂತೂ ತುಂಬ ಇಷ್ಟವಾಯ್ತು ಬಂದಾಗ ನೋಡೋರಂತೆ ಎಲ್ಲರ ರೂಮಿಗೂ ಸ್ಟಡಿ ಟೇಬಲ್ಸ್ ಬರುತ್ತೆ. ಇಲ್ಲಿ ' U ' ಶೇಪಿನ ಸೋಫಾ ಹಾಕಿಸ್ತೀನಿ ನಾವೆಲ್ಳ ಕುಳಿತು ಮಾತಾಡಕ್ಕೆ ತುಂಬ ಅನುಕೂಲವಾಗಿರುತ್ತೆ.
ರಾತ್ರಿ ಊಟ ಮುಗಿದಾಗ.......
ನಯನ.......ಅಮ್ಮ ನಾನು ನಿಮ್ಜೊತೆ ಮಲಗ್ತೀನಿ ಅಪ್ಪ ಬರುವ ತನಕ ನೀವೊಬ್ರೇ ಆಗೋಗ್ತೀರ.
ಪ್ರೀತಿ......ನಿಹಾ ಒಬ್ಬಳನ್ನೇ ಬಿಟ್ಟು ಬರ್ತೀಯೇನಮ್ಮ ?
ನಿಹಾರಿಕ......ನಾನು ಚಿನ್ನಿ ಜೊತೆ ಅಮ್ಮನ ರೂಮಲ್ಲಿ ಮಲಗ್ತೀನಿ ಮಾವ ಬರುವವರೆಗೆ ನಯನು ನಿಮ್ಜೊತೆ ಇರ್ತಾಳೆ.
ಶೀಲಾ.....ಮಕ್ಕಳಿಬ್ರೂ ಡಿಸೈಡ್ ಮಾಡಿದ್ದಾರೆ ಬಿಡು ಪ್ರೀತಿ.
ರಜನಿ.....ಇಬ್ಬರೂ ದೊಡ್ಡವರಾಗಿಲ್ವ ಶೀಲಾ ಇವರಿಗೆ ಜವಾಬ್ದಾರಿ ಬಂದಿದೆ ಹೋಗಮ್ ನಿಹಾ ನಿನ್ಜೊತೆ ಚಿನ್ನೀನೂ ಕರ್ಕೊಂಡೋಗು.
ರೂಮಿಗೆ ಬಂದು ಹಾಸಿಗೆಯೇರಿದ ನಿಶಾ ರಿಮೋಟ್ ಅಮುಕಾಡಿ ಟಿವಿ ಹಾಕಲು ಸರ್ಕಸ್ ಮಾಡಿ ವಿಫಲವಾದಾಗ......
ನಿಶಾ......ಅಕ್ಕ ಟಿವಿ ಹಾಕು ಡಕ್ಕಿ...ಡಕ್ಕಿ...ನೋತೀನಿ.
ನಿಹಾರಿಕ.......ನಿದ್ದೆ ಬರ್ತಿಲ್ವ ಚಿನ್ನಿ ಮರಿ.
ನಿಶಾ......ಸೊಪ್ಪ ನೋತೀನಿ ಅಕ್ಕ ಬೇಗ ಹಾಕು.
ಅಕ್ಕ ತಂಗಿ ಕಾರ್ಟೂನ್ ನೋಡಿ ಕಿಲಕಿಲ ನಗುತ್ತಿದ್ದಾಗ ನಿಧಿ ರೂಂ ಒಳಗೆ ಕಾಲಿಟ್ಟರೆ ನಿಶಾ ಅವಳನ್ನೂ ತನ್ನೊಂದಿಗೆಳೆದು ಮಲಗಿಸಿ ಖುಷಿಯಿಂದ ಕಾರ್ಟೂನ್ ನೋಡುತ್ತಿದ್ದಳು. ವಿದ್ಯಾಲಯದಲ್ಲಿನ ಕೆಲಸ ಮುಗಿಸಿಕೊಂಡು ಹರೀಶ ಹಿಂದಿರುಗಿ ಫ್ರೆಶಾಗಿ ಮೂವರು ಮಕ್ಕಳನ್ನು ಮುದ್ದಾಡಿ.......
ಹರೀಶ.....ಚಿನ್ನಿ ಮಲಗು ಕಂದ ಬೆಳಿಗ್ಗೆ ನೋಡುವಂತೆ.
ನಿಶಾ.......ಪಪ್ಪ ಇನ್ನಿ ಚೊಪ್ಪ ನೋಡಿ ತಾಚಿ ಮಾತೀನಿ ಆತ.
ನಿಧಿ.......ಅಪ್ಪ ನೀವು ಊಟ ಮಾಡ್ಕೊಂಡ್ ಬರೋವರೆಗಿಬ್ರೂ ನೋಡ್ತಿರ್ತಾರೆ ಪಪ್ಪ ಬಂದ್ಮೇಲೆ ತಾಚಿ ಮಾಡ್ಬೇಕು ಚಿನ್ನಿ.
ನಿಶಾ.......ಆತು ಅಕ್ಕ ನೀನಿ ಊಟ ಮಾಡಿ ಪಪ್ಪ.
ಹರೀಶ......ನಿಂದೂಟ ಆಯ್ತ ಕಂದ.
ನಿಶಾ......ಆತು ಪಪ್ಪ.
ಹರೀಶ......ನಿಂಗ್ಯಾರು ಊಟ ಮಾಡ್ಸಿದ್ದಮ್ಮ ಬಂಗಾರಿ ?
ನಿಶಾ......ನಾನಿ ಮಾದೆ ಪಪ್ಪ.
ನಿಹಾರಿಕ.......ಲೇ ಚಿಲ್ಟಾರಿ ನೀನೇ ಊಟ ಮಾಡಿದ್ಯಾ ?
ನಿಶಾ ಕಿಲಕಿಲನೇ ನಕ್ಕು.....ಮಮ್ಮ ಊಟ ಮಾಡ್ಸಿ ಪಪ್ಪ.
ನಿಧಿ.....ರಜನಿ ಆಂಟಿ ಮಾಡ್ಸಿದ್ರು ಅಪ್ಪ.
ಶೀಲಾ ಒಳಗೆ ಬರುತ್ತ......ರೀ ಟೈಮಾಗಿದೆ ನೀವಿಲ್ಲಿ ಮಕ್ಕಳ ಜೊತೆ ಮಾತಾಡ್ತಾ ನಿಂತ್ಬಿಟ್ರಾ ಮೊದಲು ಊಟ ಮಾಡಿ ಬನ್ನಿ ನೀವು ಬಂದ್ಮೇಲೆ ಅಪ್ಪನ ಜೊತೆಗೇ ಊಟ ಮಾಡ್ತೀನಂತೇಳಿ ನಿಧಿ ಇನ್ನೂ ಊಟ ಮಾಡದೆ ನಿಮ್ಮನ್ನೇ ಕಾಯ್ತಿದ್ಳು.
ಹರೀಶ......ಯಾಕಮ್ಮ ಕಂದ ನೀನು ಊಟ ಮಾಡೋದು ತಾನೆ ನಾನೆಷ್ಟೊತ್ತಿಗೆ ಬರ್ತೀನಂತ ನನಗೇ ಗೊತ್ತಿರಲ್ಲ ನೋಡಲ್ಲಿ ಹತ್ತು ಘಂಟೆಯಾಗ್ತಾ ಬಂತು ಹೊಟ್ಟೆ ಹಸಿದುಕೊಂಡಿರ್ತೀಯಲ್ಲಮ್ಮ.
ನಿಧಿ.......ಅಮ್ಮ ಇದ್ದಿದ್ರೆ ನಿಮ್ಮನ್ನ ಕಾಯ್ತಿರಲಿಲ್ವೇನಪ್ಪ ಅದಕ್ಕೆ ಅಮ್ಮ ಬರೋತನಕ ನಾನು ಕಾಯ್ತೀನಿ.
ಶೀಲಾ.......ರೀ ನಾಳೆಯಿಂದ ಸ್ವಲ್ಪ ಬೇಗ ಬನ್ನಿ ಇಲ್ಲಾಂದ್ರೆ ನೀವು ಬರೋತನಕ ನಿಧಿನೂ ಊಟ ಮಾಡದೆ ಕೂತಿರ್ತಾಳೆ.
ಹರೀಶ.....ಬರಲೇಬೇಕು ಶೀಲಾ ಇಲ್ಲಾಂದ್ರೆ ನನ್ನೀ ಮಗಳು ಊಟ ಬಿಟ್ಟು ನನ್ನೇ ಕಾಯ್ಕೊಂಡ್ ಕೂರ್ತಿತಾಳಲ್ಲ.
ನಿಧಿ......ನಂಗೇನಷ್ಟೊಂದು ಹೊಟ್ಟೆ ಹಸಿತಿರಲಿಲ್ಲ ಆದರೀಗ ಸ್ವಲ್ಪ ಜಾಸ್ತಿ ಹಸಿತಿದೆ ನಡೀರಿ ಮೊದಲು ಊಟ ಮಾಡಣ.
ಕೆಳಗಿನ ಲಿವಿಂಗ್ ಹಾಲಿನಲ್ಲಿ........
ಸುಮ.....ಸುಕ್ಕು ಎಷ್ಟೇ ಕೆಲಸವಿರಲಿ ನಾಳೆಯಿಂದ ಕತ್ತಲಾಗುವ ಮುಂಚೆ ನೀನು ಮನೆಗೆ ಬಂದ್ಬಿಡೆ.
ರಜನಿ......ನೀನೇ ನಮ್ಮಮ್ಮ ಅನ್ನೋದೆ ಚಿಂಕಿಗೆ ಮರೆತೋಗುತ್ತೆ ಈಗಲೇ ನುತು ಹಿಂದೆ ಮಮ್ಮ ಅಂತ ಓಡಾಡ್ತಿರ್ತಾಳೆ.
ಸವಿತಾ.......ನಾಳೆಯಿಂದ ನಾನೇ ಬೇಗ ಕಳಿಸ್ತೀನಿ ರಜನಿ.
ಸುಭಾಷ್.....ಆಂಟಿ ನಾನು ಬರುವಾಗಲ್ಲಿಗೇ ಬರ್ತೀನಿ ನನ್ಜೊತೆ ಬಂದ್ಬಿಡಿ ಯಾರನ್ನೂ ಕಾಯುವ ಅಗತ್ಯವಿರಲ್ಲ.
ಎಲ್ಲರೂ ಊಟ ಮುಗಿಸಿ ಸ್ವಲ್ಪ ಹೊತ್ತು ಮಾತನಾಡಿ ತಮ್ತಮ್ಮ ರೂಮಿಗೆ ತೆರಳಿದರೆ ನಿಧಿ—ನಿಕಿತಾ ಹೊಸ ಮನೆಯಲ್ಲಿನ ತಮ್ಮ ರೂಮಿನತ್ತ ತೆರಳಿದರು. ಹರೀಶ ಬಂದಾಗ ನಿಶಾ —ನಿಹಾರಿಕ ಅಮ್ಮನಿಗೆ ವೀಡಿಯೋ ಕಾಲ್ ಮಾಡಿ ಮಾತಾಡುತ್ತಿದ್ದು ನಿಶಾ ಅಮ್ಮನಿಗೆಲ್ಲಾ ವರದಿ ಒಪ್ಪಿಸುತ್ತ ಬೇಗ ಬರುವಂತೇಳುತ್ತಿದ್ದಳು. ಹರೀಶ ಮಲಗಿಕೊಂಡ ತಕ್ಷಣ ಅಪ್ಪನ ಮೇಲೇರಿದ ನಿಶಾ ತಾನು ಏನೆಲ್ಲ ಆಟವಾಡಿದೆ ಅಂತ ಅಪ್ಪನಿಗೇಳಿ ನಿದ್ರೆಗೆ ಶರಣಾದಳು.