ಬಿದಿರಿನಿಂದ ನಾನಾ ಸಲಕರಣೆಗಳನ್ನು ತಯಾರಿಸಿ, ಅದನ್ನು ಶಹರಕ್ಕೆ ಕೊಂಡುಹೋಗಿ ಮಾರಿ, ಅದರಿಂದ ಬರುವ ಆದಾಯದಿಂದ ಕಾಡಿನಲ್ಲಿ ತಮಗೆ ಲಭ್ಯವಿಲ್ಲದಂತಹ ಲೋಹ, ಬಟ್ಟೆ ಬರೆ ಇತ್ಯಾದಿಗಳನ್ನು ಖರೀದಿಸಿ ಜೀವನ ಸಾಗಿಸುವ ತಾಂಡ್ಯವಾಗಿದ್ದರಿಂದ ಅಲ್ಲಗೆ ಬಿದಿರುಮೆಟ್ಟು ಎಂಬ ಹೆಸರಿದೆ. ಸುಮಾರು ೪೦೦ ಜನರನ್ನು ಹೊಂದಿರುವ ತಾಂಡ್ಯದ ನಾಯಕ ಬೀರ, ಅವನ ಹೆಂಡತಿ ಕೆಂಪಿ. ಇವರಿಬ್ಬರಿಗೂ...